Sunday, March 17, 2019

ಹೂವಿನಂತಹ ಮೃದುತ್ವ

ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೊಂದು ತತ್ವ,
ಮನಸ್ಸಾಗಬೇಕು ಹೂವಿನಂತಹ ಮೃದುತ್ವ;
ಆಡುವ ಮಾತಿನಲ್ಲಿ ಇರಬೇಕು ಒಳ್ಳೆಯ ಸತ್ವ,
ಆಗ ಅರಿಯುವೆವು ಪರಿಪೂರ್ಣ ಜೀವನದ ಮಹತ್ವ.
                                 - ಸ್ಫೂರ್ತಿ

ಸ್ವಂತಿಕೆಯ ಬದುಕು

ಯಾರನ್ನು ಸಹ ನಂಬಿ ನಾನ್ ಬದುಕುತಿಲ್ಲ,
ಯಾವುದು ಇಲ್ಲಿ ಅಸಾಧ್ಯ ಎಂದು ನನಗನಿಸಿಲ್ಲ;
ಬೇಡ ಎಂದು ಜರಿದವರ ಹಿಂದೆ ನಾ ಹೋಗಲ್ಲ,
ಯಾರು ಇಲ್ಲ ಎಂದು ನೋವಿನಲ್ಲಿ ನರಳುತಿಲ್ಲ;
ಯಾರೆ ಬಂದರು ಬಿಟ್ಟರು ಸಾಧನೆಯ ಓಟ ನಿಲ್ಲಲ್ಲ.
                       - ಸ್ಫೂರ್ತಿ

ಶಿಕ್ಷಣದ ಭಾರ

ಶಿಕ್ಷಣವು ಕಲಿಸುವುದು ಶಿಸ್ತು ಎನ್ನುವ ಸಾರ,
ಕಲಿಯುವ ಮನಸ್ಸುಗಳಿಗೆ ಶಿಕ್ಷಣ ಇಂದು ಭಾರ;
ಕಲಿತರೆ ಜೀವನಕ್ಕೆ ದೊರಕುವುದು ಒಳ್ಳೆಯ ಆಧಾರ,
ಈ ದೇಶಕ್ಕೆ ನಾವಾಗುವೆವು ಇತಿಹಾಸದ ಹೆಮ್ಮರ. 
                          - ಸ್ಫೂರ್ತಿ

ಭಾವನೆಯಲ್ಲೊಂದು ಪರ್ವ


ಮೂಕ ಭಾವನೆಗಳಲ್ಲಡಗಿದೆ ನಿನ್ನ ಪ್ರೀತಿ,
ಅದನ್ನು‌ ತಿಳಿಸಬೇಕೆನ್ನುವುದೇ ನನ್ನ ಪ್ರತೀತಿ;
ಸದಾ ಕಾಡುವುದು ನಿನ್ನ ನ್ಯೂನ್ಯತೆಯ ಅಭಾವ,
ನೀನಿಲ್ಲದ ಈ ಬದುಕು ಬರೀ ಶೂನ್ಯದ ಭಾವ.

                          - ಸ್ಫೂರ್ತಿ

ಆನಂದದ ಅರಮನೆಗೆ ಪಯಣ

ಮೌನವೆಂಬ ಪ್ರಪಾತಕ್ಕೆ ಧುಮುಕಿ ಬಿದ್ದೆನು ಕಾಲು ಜಾರಿ,
ದ್ವಂದ್ವದ ವಿಚಾರಗಳಲ್ಲಿ ಅಳುಕುವೆನು ನಾನು ಪ್ರತಿಬಾರಿ;
ಭಯವೆಂಬ ಬಿಸಿಲಬೇಗೆಯಲ್ಲಿ ಒಣಗುತ್ತಿರುವೆನು ಪ್ರತಿಸಾರಿ,
ಆನಂದವೆಂಬ ಅರಮನೆಗೆ ಎಲ್ಲಿ ಸಿಗುತ್ತದೆ ದಾರಿ???

                     - ಸ್ಫೂರ್ತಿ

ಅಂದ ಚೆಂದದ ಬದುಕು

ಕಾಣದ ದೇವನಿಗಿಂತ ಕಾಣುವ ತಂದೆ-ತಾಯಿ ಚೆಂದ,
ಹುಡುಕುವ ಪ್ರೀತಿಯಿಂತ ಸನಿಹವಿರುವ ಸ್ನೇಹ ಅಂದ;
ದರ್ಶಿಸುವ ಚೆಲುವಿಗಿಂತ ಒಳ್ಳೆಯ ಮನಸ್ಸು ಚೆಂದ,
ವಿಷಕಕ್ಕುವ ಜನಕ್ಕಂತ ಹಾರೈಸುವ ಕೈಗಳು ಅಂದ.
            - ಸ್ಫೂರ್ತಿ

ವ್ಯಂಗ್ಯದ ನಡುವೆ

ಸುತ್ತ-ಮುತ್ತಲಿದ್ದವರು ನನ್ನ ಬಂಧುಗಳಂತೆ ಕಂಡರು,
ನನ್ನ ಸೋಲಿಗಾಗಿಯೇ ಖುಷಿಯಿಂದ ಕಾಯುತ್ತಿದ್ದರು;
ಎಡಬಿಡದೆ ವ್ಯಂಗ್ಯದಿಂದ ತೂರುತ್ತಿದರು ಕಲ್ಲುಗಳನ್ನು,
ಆದೆ ಕಲ್ಲುಗಳಿಂದ ಕಟ್ಟುವೆನು ಯಶಸ್ಸಿನ ಗೋಪುರವನ್ನು.
                                    - ಸ್ಫೂರ್ತಿ

ಮಹಿಳೆ

ಅಳುತ್ತಾ ಜಗಕೆ ಬರುವಳು ಹೆಣ್ಣು ಮಗುವಾಗಿ,
ಕಷ್ಟವನು ದಾಟಿ ಬೆಳೆಯುವಳು ಸುಂದರ ಹೆಣ್ಣಾಗಿ;
ಪೋಷಿಸುವಳು ಹಿರಿತನವನು ರಕ್ಷಿಸುವ ಅಕ್ಕನಾಗಿ,
ಚೇಷ್ಟೆಮಾಡುವಳು ಮುಗ್ಧತೆ ಬೀರುವ ತಂಗಿಯಾಗಿ;
ಸಹಾಯ ಹಸ್ತವ ನೀಡುವಳು ವಿಶ್ವಾಸ ಸ್ನೇಹಿತೆಯಾಗಿ,
ಪ್ರೀತಿಸುವಳು ನಂಬಿಕೆಗೆ ಪಾತ್ರವಾದ ಪ್ರೇಮಿಯಾಗಿ,
ಸತಿ ಧರ್ಮವ ಪಾಲಿಸುವಳು ಹೆಮ್ಮೆಯ ಮಡದಿಯಾಗಿ;
ಎಲ್ಲವನ್ನೂ ನಿಭಾಯಿಸವಳು ಮನೆಯ ಸೊಸೆಯಾಗಿ,,
ನಿಸ್ವಾರ್ಥದ ಮಮತೆಯನು ತೋರುವಳು ತಾಯಾಗಿ;
ಬಾಳ ಪಾಠವನು ಬೋಧಿಸುವಳು ಮೊದಲ ಗುರುವಾಗಿ,
ಈ ಸೃಷ್ಟಿಗೆ ಮಾದರಿಯಾಗುಳು ಓರ್ವ ಮಹಿಳೆಯಾಗಿ.
                                  - ಸ್ಫೂರ್ತಿ

ಮುಂಗುರುಳು

ನಿನ್ನ ಕೋಮಲತೆಯ ರಶ್ಮಿಗೆ ಬೆಚ್ಚಿಬಿದ್ದಿರುವೆ ನಾನು,
ಆ ಮೃದತ್ವದ ಅಕ್ಷಿಗಳಿಗೆ ಸೋತಿರುವೆ ನಾನು;
ರಮಣೀಯತೆಯ ತೇಜೊ ಕಾಂತಿಗೆ ಮಾರುಹೋದೆನು
ಸರಿಸಿ ನೋಡುವ ಆ ಮುಂಗುರುಳಿಗೆ ಮೂಕನಾದೆನು.

ಗುಲಾಬಿ


ಲೋಕವನು ಸೃಷ್ಟಿಸಿದ ಬ್ರಹ್ಮನೇ ಇದರಲ್ಲಿ ಕಾಂತಿಯನಿಟ್ಟ,
ಮನದ ಮಾತುಗಳನು ಹೇಳಲು ಇದನೋಡಿ ಪ್ರೀತಿಯಿಟ್ಟ;
ಭಾವನಾತ್ಮಕ ಸಂಬಂಧಗಳಿಗೆ ಇದರತುಂಬ ಪ್ರಾಣವಿಟ್ಟ,
ದ್ವೇಷ ಮನಸ್ತಾಪಗಳ ಸಂಪರ್ಕಕ್ಕೆ ಇದರಲ್ಲೇ ಮುಳ್ಳಿಟ್ಟ!!

ತಪಸ್ಸು

ಬಿರಿಯುತ್ತಿರುವ ಮಾರ್ಗದಲ್ಲಿ ಸಂಚರಿಸಿದೆ ನಾನು,
ಆತ್ಮಸ್ಥೈರ್ಯದ ಶಿಖರದಲ್ಲಿ ನನ್ನ ಜ್ಞಾನದ ತಪಸ್ಸು;
ಕಲ್ಲು,ಮುಳ್ಳು,ಬಂಡೆಗಳ ಜೊತೆ ಗುದ್ದಾಡಿದೆ ನಾನು,
ಧೃತಿಗೆಡದೆ ಇಚ್ಚಾಶಕ್ತಿಯು ತರುವುದು ನನಗೆ ಯಶಸ್ಸು. 

ಶಿವ ಶಂಕರ

ಜಟೆಯಲ್ಲಿ ಗಂಗೆಯನ್ನು ಹೊತ್ತ ಗಂಗಾಧರ,
ಕ್ರೋಧರಿಗೆ ತ್ರಿನೇತ್ರವನು ತೆರೆದ ಮುಕ್ಕಣ್ಣೇಶ್ವರ;
ಲೋಕವನ್ನು ಸನ್ಮಾರ್ಗದಲ್ಲಿ ನಡೆಸಿದ ಗೌರಿಹರ,
ದುಷ್ಟರ ಸಂಹಾರಿಸಿ ಶಿಷ್ಟರ ಪಾಲಿಪ ಈ ಪರಮೇಶ್ವರ.

ಆಸೆಯ ಅಟ್ಟಣಿಗೆ


ಮಳೆರಾಯನ ಆರ್ಭಟಕ್ಕೆ ಕಾಯುತಿರಲು,
ಅಷ್ಟಾಂಗದಲ್ಲಿ ಆಸೆಗಳ ಭಾವ ತುಂಬಿದೆ;
ಬಾಳಿನ ಬವಣೆಯನ್ನು ಮರೆಯುತಿರಲು,
ಒಂದೊಳ್ಳೆ ದಿನಕ್ಕೆ ಮನ ಹಾತೊರೆದಿದೆ.

ಭವದ ಕುಣಿತ


ನಾಟ್ಯರಾಜನಾದ ನಟರಾಜನನ್ನು ಮನದಲ್ಲಿ ಸ್ಮರಿಸಿ,
ಕಾಲ್ಗೆಜ್ಜೆಯನು ಕಟ್ಟಿ ಭಾವನೆಗಳಿಗೆ ಜೀವವನು ತುಂಬಿಸಿ;
ಹಾಡು,ರಾಗ,ತಾಳ,ವಾದ್ಯಕ್ಕೆ ತಕ್ಕಂತೆ ಕುಣಿದು ಶೋಭಿಸಿ,
ನಟನೆಯ ವಿನೋದವನ್ನು ಬಿಂಬಿಸಿ ಕುಣಿಯುವುದು ಈ ಭವದ ಕುಣಿತ.


ನೌಕೆ

ಬಾಳೆಂಬ ನೌಕೆಯು ಸದ್ದಿಲ್ಲದಂತೆ ತಯಾರಾಗಿದೆ,
ದೂರ ತೀರವನು ಆ ದೇವನದೂತನು ರಚಿಸಾಗಿದೆ;
ಪ್ರಯಾಣಿಕನಂತೆ ಒಂದೇ ಸಮನೆ ನಾ ಚಲಿಸಬೇಕಿದೆ,
ವಿಜಯದ ದ್ವೀಪವ ಕಾಣುವ ಆತ್ಮವಿಶ್ವಾಸ ನನ್ನಲ್ಲಿ ಮೂಡಿದೆ.

ಕಾಯಕ

ಇರಬೇಕು ಮಾಡುವ ಕೆಲಸ ಕಾರ್ಯಗಳಲ್ಲಿ ನಿಷ್ಠೆ,
ಸದಾ ನಿಯಂತ್ರಿಸುತ್ತಿರಬೇಕು ಒಳ ಮನಸ್ಸಿನ ಚೇಷ್ಟೆ;
ಕಣ ಕಣದ ಕಾಯಕದಲ್ಲೂ ಕಾಣಬೇಕು ದೇವರ ಶಕ್ತಿ,
ಆಗಮಾತ್ರ ದೇಹಕ್ಕೆ ತಾಕುವುದು ನೆಮ್ಮದಿಯ ಮುಕ್ತಿ.

ಮೋಸವೆಂಬ ಪಾಷಾಣ

ಯಾವ ಕನಸಿನ ಕುಲುಮೆಯು ಕರೆಯಿತೋ,
ನನಸಾಗದ ದುಃಖದ ಲೋಕಕ್ಕೆ ನನ್ನನ್ನು;
ಯಾವ ಪ್ರೀತಿಯ ದಿಗ್ಭ್ರಂತಿಯು ಸೆಳೆಯಿತೋ,
ಮೋಸವೆಂಬ ಬಲೆಯ ಪಾಷಾಣಕ್ಕೆ ನನ್ನನ್ನು.

ವಿಜಯೀಭವ

ಕೊನೆಗೂ ತೀರಿಸಿಕೊಂಡರು ನೋವಿನ ರೋಷವನು,
ಶತ್ರುವಿನ ಸೈನ್ಯವ ಹೆಮ್ಮೆಯಿಂದ ಮಾಡಿದರು ಧ್ವಂಸವನು;
ಜಯದ ಪತಾಕೆಯನು ಮರಣವಾದ ಆತ್ಮಕ್ಕೆ ಅರ್ಪಿಸಿದರು,
ಅಟ್ಟಹಾಸ ಮೆರೆಯುತ್ತಾ ಸಂಭ್ರಮಿಸುತ್ತಿದ್ದಾರೆ ನಮ್ಮ ಸೈನಿಕರು.

ಒಡಲ ಬೆಂಕಿ

ನಾನು ನಡೆಯುತ್ತಿದ ಕಾಲುದಾರಿಯು ಮುಗಿಯಿತು,
ನಿನ್ನ ಅಪನಂಬಿಕೆಯಂತಹ ಮೋಸದ ಪ್ರೀತಿಯ ಕಂಡು;
ಸಹಿಸದೆ ಈ ಚಿತ್ತವು ದುಃಖದಿಂದ ಕುಗ್ಗಿ ನಶಿಸಿಹೋಯಿತು,
ನೋವು ಅವಮಾನ ಎಂಬ ಸುಳ್ಳಿನ ರೀತಿಯಲ್ಲಿ ಬೆಂದು;
ಒಳ ಮನಸ್ಸಿನ ಹೊಸ ಕನಸಿನ ಪುಟಗಳು ಶುರುವಾಯಿತು,
ಸಾಧಿಸಿಯೇ ತೀರಬೇಕೆಂಬ ಆ ಒಡಲ ಕಿಚ್ಚಲ್ಲಿ ಮಿಂದು.

ಎಲ್ಲಿದೆ

ಸಮುದ್ರದಲ್ಲಿ ಅಪ್ಪಳಿಸುವ ಅಲೆಗಳಿಗೆ ಕೊನೆಯಲ್ಲಿದೆ??
ಜ್ಞಾನದ ಬೆಳಕ ಅರಿಯುವ ವಿದ್ಯೆಗೆ ಆಳವೆಲ್ಲಿದೆ??
ಮುಗಿಲೆತ್ತರದ ಸಾಧನೆಯ ಹಾದಿಗೆ ಮಿತಿಯಲ್ಲಿದೆ??
ಪ್ರಾಮಾಣಿಕದಿಂದ ಇರುವ ಮನಸ್ಸಿಗೆ ಬೆಲೆಯಲ್ಲಿದೆ??

ಕಳೆದು ಹೋಗುವ ಭೀತಿ

ಕಲ್ಪನೆಗೂ ನಿಲುಕದು ಈ ನಂಬಿಕೆಯ ಪ್ರೀತಿ,
ಇದರ ಅರ್ಥವನು ನಾ ಹುಡುಕುವುದು ಯಾವ ರೀತಿ??
ನೆನಪೆಂಬ ದಾರಿಯಲ್ಲೇ ಅಡಗಿದೆ ನನ್ನ ಭ್ರಾಂತಿ;
ಈ ಪ್ರೀತಿ ಮುಂದೆ ಮೋಸವಾಗುವುದೆನೋ ಎಂಬ ಭೀತಿ.

ಹೇ ಮಾನವ ವ್ಯರ್ಥ ಮಾಡದಿರು ನಿನ್ನ ಜೀವನ

ಉಸಿರಿದ್ದು ಸಾಧಿಸದ ಜೀವನ ವ್ಯರ್ಥ,
ಸಂಪತ್ತಿದ್ದು ದಾನ ಮಾಡದ ಬಾಳು ಅನರ್ಥ;
ಪ್ರೀತಿ ಇದ್ದು ನಂಬಿಕೆ ಇರದ ಸಂಬಂಧ ಅಪಾರ್ಥ,
ಮನುಷ್ಯನಾಗಿದ್ದು ಮನುಷ್ಯತ್ವವಿರದ ಧರ್ಮ ನಿರರ್ಥ.

ಹಸಿವ ಹಿಡಿತ

ಒಂದು ತುತ್ತು ಅನ್ನಕ್ಕಾಗಿ ಸೀಳುತ್ತಿದೆ ಹಸಿವು,
ಹಸಿವನು ನೀಗಿಸಲು ಹಾತೊರೆಯುತ್ತಿದೆ ಜೀವವು;
ಆಹಾರ ಸಿಗುವುದು ಎಂಬ ಖುಷಿಯ ಭಾವವಿರಲು,
ತನ್ನ ಬಳಗವನ್ನೆಲ್ಲಾ ಕೂಗಿ ಕೂಗಿ ಕರೆಯುತಿರಲು.

ಕಾಯುವೆನು ನಾ ಆ ಕನಸಿಗಾಗಿ

ನೆನಪನ್ನೇ ಪ್ರೀತಿಸಿ ನಾ ಉಸಿರಾಡಿದೆ,
ನೆಪವನ್ನು ಹೇಳುತ್ತಾ ನಾ ಬದುಕಿದೆ;
ಕನಸುಗಳನು ಕಾಣುತ್ತಾ ನಾ ಸಾಗಿದೆ,
ಅದು ನನಸಾಗವರೆಗೂ ನಾ ಕಾಯುವೆ.

ಶ್ವೇತ ಸಂದೇಶ


ನಾ ಯಾವುದೋ ಮೂಲೆಯಲ್ಲಿ ಕಂಡೆನು ನಿನ್ನನು,
ನಿನ್ನ ಕಂಡಕೂಡಲೇ ಮೈಮರೆತೆ ನನ್ನನ್ನೇ ನಾನು;
ಬರೆದು ಕಳುಹಿಸಿದೆ ನಿನಗೊಂದು ಶ್ವೇತ ಸಂದೇಶ,
ಅದರ ತುಂಬಾ ತುಂಬಿದೆ ನನ್ನ ಪ್ರೀತಿಯ ಅಂಶ.

ಮಣ್ಣಿನ ಮಡಕೆಯಂತೆ ಬಾಳು

ಮಣ್ಣಿನ ಮಡಕೆಯಂತೆ ನಮ್ಮೆಲ್ಲರ ಬಾಳು,
ಒಮ್ಮೆ ಬಿದ್ದರೆ ಪ್ರಯೋಜನಕ್ಕೆ ಬಾರದೆ ಅದು ಹಾಳು;
ನಮಗೆ ಇಲ್ಲಿ ಬೇಕೇ ಅರಿಷಡ್ವರ್ಗಗಳ ಗೋಳು???
ತುಂಬಿದ ಮಡಕೆಯಂತೆ ಬದುಕೆಂದು ಮನಃಸಾಕ್ಷಿಗೆ ಹೇಳು???

ದಾರಿ

ನಗುವನು ಅರಿತವರಿಗೆ ಸಂತೋಷವೇ ದಾರಿ,
ಸಾರ್ಥಕತೆಯನು ಬಯಸಿದವರಿಗೆ ಮೋಕ್ಷವೇ ದಾರಿ;
ಸತ್ಯ ಮಾರ್ಗದಲ್ಲಿ ಸಂಚರಿಸುವರಿಗೆ ಧರ್ಮವೇ ದಾರಿ,
ಪಾಪದ ಕೆಲಸ ಮಾಡುವವರಿಗೆ ಎಲ್ಲಿ ಸಿಗುತ್ತದೆ ದಾರಿ??

ಯೋಧ

ದೇಶವ ರಕ್ಷಿಸಲು ಹೊರಟ ಯೋಧರು,
ರಕ್ತದೋಕುಳಿಯಲ್ಲಿ ವಿಜಯಿಸಿದ ವೀರರು;
ಅಗ್ನಿಯ ಜ್ವಾಲೆಯಂತೆ ಅಬ್ಬರಿಸಿದ ಶೂರರು,
ಪ್ರಾಣ ತ್ಯಾಗವ ಮಾಡಿ ದೇಶವ ರಕ್ಷಿಸಿದವರು;
ಅವರೇ ನಮ್ಮ ದೇಶದ ಹುತಾತ್ಮ ಸೈನಿಕರು.

ಪ್ರೀತಿ ಪ್ರೇಮ ಪ್ರಣಯ

ಚಂದ್ರಮಕೆ ಹೋಲಿಸಿದೆನು ನಿನ್ನ ಅಂದವನು,
ನಿನ್ನ ಕಣ್ಣ್ಗಳಲ್ಲಿ ಕಂಡೆನು ಅದರ ಬಿಂಬವನು;
ಮಳೆಯ ಹನಿಯಂತೆ ಸುರಿಸು ನಿನ್ನ ನಗುವನು,
ಸದಾ ಆ ನಗುವ ಜೊತೆಯಲ್ಲೇ ಇರುವೆ ನಾನು.

ಪ್ರೇಮಿ

ಸ್ನೇಹಕ್ಕೆ ಪ್ರೀತಿಯ ಸಿಂಚನ ನೀ,
ಪ್ರೀತಿಗೆ ಮಿಡಿಯುವ ಚಂದನ ನೀ;
ಭಾವನೆಗಳಿಗೆ ಒಲಿಯುವ ಬಂಧನ ನೀ,
ವಿರಹವ ಮರೆಸುವ ಅಂದದ ಪ್ರೀಮಿ ನೀ.

ಮಾನವ ಧರ್ಮವವ ಅರಿಯೋ ನೀ ಮಾನವ

ಜನನವೆಂಬುದು ಮಾನವ ಧರ್ಮದ ಮೂಲ ಆಧಾರ,
ಮರಣವೆಂಬುದು ವಿಧಿಯೇ ರಚಿಸಿದ ಪೂರ್ವ ನಿರ್ಧಾರ;
ಇದರ ಮಧ್ಯೆ ಕೆಲಸ ನಡೆಯುವುದು ಮನಃಸ್ಥಿತಿಗಳ ಪ್ರಕಾರ,
ಇರುವ ನಾಲ್ಕು ದಿನದ ಬದುಕಲ್ಲಿ ಏಕೆ ಅಸೂಯೆಗಳ ಪ್ರತಿಕಾರ??

ಪ್ರೀತಿ ಎಂಬ ಧ್ಯಾನ

ಬೇಸವೆಂಬ ಕಾನನದಲ್ಲಿ ಶಾಮಿಲಾಗಿದೆ ನನ್ನ ಮನ,
ನೆನಪಿನ ಕವಲು ದಾರಿಯನು ಹಿಡಿದು ಸಾಗಿದೆ ನನ್ನತನ;
ಇಂದೊ ನಾಳೆ ಒಂದಾಗುವೆವು ಎಂಬುದೆ ಪ್ರತಿದಿನದ ಧ್ಯಾನ,
ಈ ನನ್ನ ಪ್ರಾರ್ಥನೆ ಫಲಿಸುವುದು ಮುಂದೊಂದು ದಿನ.

ಭಾಸವಿರದ ಪ್ರೀತಿ

ಪ್ರೀತಿಯ ಬೇಗೆಗೆ ನಿನ್ನ ನಂಬಿಕೆಯೆಂಬುದೆ ನೆರಳು,
ದಿನವಿಡಿ ಕನಸು ಕಾಣುತ ನಾ ಮರೆತೆ ಹಗಲಿರುಳು;
ನೀ ನನ್ನ ತೊರೆದರೆ ಭಾಸಿಸುವುದ ದುಃಖದ ಕರುಳು,
ನೋವಿನು ಬಿಗಿ ಹಿಡಿದು ಅಳುವುದು ಈ ನನ್ನ ಕೊರಳು.
                     

ಶ್ರೇಷ್ಠತೆಯ ಬದುಕು

ಹಗೆತನವ ಸಾಧಿಸುವೆ ಏಕೆ ಮಾನವ??
ಎಲ್ಲರೊಳಗೆ ನೀ ಆಗಬೇಕು ದಾನವ,
ಕಷ್ಟ ಸುಖದೊಳಗೆ ಬಾಗುವುದ ನೀ ಅರಿತರೆ?
ನಿನ್ನ ಜೀವನವಾಗುವುದು ಪರರಿಗೆ ಶ್ರೇಷ್ಠತೆಯ ಆಸರೆ.

ಜ್ಞಾನದ ಪ್ರತಿರೂಪ

ಪ್ರತಿಫಲವನು ಆಶಿಸದೆ ಮಾಡಬೇಕು ಕೆಲಸ,
ಶ್ರಮಜೀವನಕ್ಕೆ ಸಿಗುವುದು ಸಾರ್ಥಕತೆಯ ಸಂತಸ;
ನಿಸ್ವಾರ್ಥದ ಹೃದಯವು ಇದ್ದರೆ ನಿನ್ನಲ್ಲಿ,
ಜ್ಞಾನದ ಪ್ರತಿರೂಪ ಆಗುವೆ ನೀ ಇಲ್ಲಿ.

ಬದಲಾವಣೆ

ಸೂರ್ಯ,ಚಂದ್ರ,ಭೂಮಿ ಬದಲಾಗಲಿಲ್ಲ,
ನೆಲ,ಜಲ,ಸಂಪನ್ಮೂಲಗಳು ಪ್ರತಿಯಾಗಲಿಲ್ಲ;
ಈ ಸೃಷ್ಟಿಯಲ್ಲಿ ಮನುಷ್ಯರು ಬದಲಾಗುತ್ತಾರೆ ಏಕೆ??
ಅವರ ಮನುಷ್ಯತ್ವ ಬದಲಾಗುತ್ತಿದೆ ಏಕೆ??

ದಾಟು

ಬಾಳೆಂಬ ಮುಳ್ಳಿನ ಮೇಲೆ ನಡೆಯಬೇಕಿದೆ,
ಅವಮಾನವೆಂಬ ಕೆಂಡವನ್ನು ಹಾಯಬೇಕಿದೆ;
ಕಷ್ಟಗಳೆಂಬ ಬೆಟ್ಟಗಳನ್ನು ಹತ್ತಬೇಕಿದೆ,
ನೋವುಗಳೆಂಬ ಸಾಗರವನ್ನು ದಾಟಬೇಕಿದೆ;
ಇವುಗಳನ್ನೆಲ್ಲಾ ಸಾಧಿಸಲು ಆತ್ಮಸ್ಥೈರ್ಯ ಬೇಕಿದೆ.

ಕಲ್ಪವೃಕ್ಷ

ಜೀವನ ಎಂಬ ನಿರ್ಜನ ಪ್ರದೇಶದಲ್ಲಿ,
ಅರಳಬೇಕು ಸುಗಂಧಭರಿತ ಪುಷ್ಪವಾಗಿ;
ನೋವುಗಳೆಂಬ ಜಟಿಲವಾದ ಕಾನನದಲ್ಲಿ,
ಬೆಳೆಯಬೇಕು ಆಸರೆಯಾಗುವ ಕಲ್ಪವೃಕ್ಷವಾಗಿ.

ಗಿರಿಯಲಿ ಗೂಡು

ಸೃಷ್ಟಿಯ ಸೊಬಗನು ಇಂದು ಸವಿಯಬೇಕು ನಾನು,
ಅಂತ್ಯವಿಲ್ಲ ಹುಡುಕುತ್ತಾ ಹೊರಟರೆ ಅದರ ಜಾಡು;
ಬಾಳ್ವಿಕೆಯ ಬೇಗುದಿಯ ಮರೆಯಬೇಕು ನಾನು,
ಅದಕ್ಕಾಗಿ ಬೇಕು ನನಗೆ ಗಿರಿಯಲ್ಲಿ ಒಂದು ಗೂಡು.

ಮರಳ ಮೇಲೆ ಹೆಜ್ಜೆ ಬರಹ

ವಿವಶವಾದ ಪ್ರೀತಿಯು ಹದವಿಲ್ಲದೆ ಕೊನೆಯಾಯಿತು,
ನೆನಪುಗಳ ಬಿರುಗಾಳಿಯು ಒಂದೇ ಸಮನೆ ಬೀಸಿತು;
ಮರಳ ಮೇಲೆ ಬಿಟ್ಟುಹೋದ ಹೆಜ್ಜೆಗುರುತು ಅರಳಿತು,
ರಭಸವಾದ ಆಲೆಗಳಿಗೆ ಬರೆದ ಕವನ ಅಳಿಸಿ ಹೋಯಿತು.

ಪರೀಕ್ಷಿತ

ಮುಗಿಲೆತ್ತರದ ಆಸೆ-ಅಪೇಕ್ಷೆಗಳನ್ನು ವರ್ಜಿಸಿ,
ಕೈಗೆಟುಕುವ ಕನಸಿನ ಕಾಮನೆಗಳನ್ನು ಮಾರಿದೆಯಾ??
ಒಂದೊಪ್ಪತ್ತಿಗಾಗಿ ಹಾದಿ ಬೀದಿಗಳಲ್ಲಿ ಬಯಸಿ,
ಸಂತೋಷದ ನಾಳೆಗಳನ್ನು ಖುಷಿಯಿಂದ ಕಾಯುವೆಯಾ??

Friday, February 1, 2019

ಶಾಯಿಯ ಬೆಂಬಲ

ಹೃದಯದಲ್ಲಿ ನಿನ್ನ ಹೆಸರನು ಉಲ್ಲೇಖಿಸಲು,
ಬೇಕಾಗಿದೆ ನನಗೆ ಶಾಯಿಯ ಬೆಂಬಲ;
ಅಂತಃಕರಣದಲ್ಲಿ ನಿನ್ನ ನೆನಪನು ನೆನೆಯಲು,
ಭಾವಪರವಶವಾದ ಈ ಮನಸ್ಸ ಹಂಬಲ. 

ಮೌನರಾಗ


ಆಲೋಚನೆಗಳಲ್ಲಿ ತೊಡಗಿದೆ ಈ ಅಂತರಂಗ,
ದ್ಗಿಭ್ರಾಂತಿಯ ಸರಪಳಿಯಲ್ಲಿ ಸಿಲುಕಿದೆ ಬಹಿರಂಗ;
ವಿನೋದ ಭಾವಕ್ಕೆ ವಿರಾಮದ ಕೆಲಸ ಇಂದು ಸರಾಗ;
ದುಃಖತಪ್ತ ಮನದಲ್ಲಿ ಕೇಳುತ್ತಿದೆ ಗುಂಗಿನ ಮೌನರಾಗ.,

ಜಲಧಾರೆ

ಭೋರ್ಗರೆಯುತ್ತಾ ಹರಿಯುತ್ತಿದೆ ಜಲಧಾರೆ,
ಅದರ ರಭಸಕ್ಕೆ ಮಿನುಗುತ್ತಿತ್ತು ಆ ಸೂರ್ಯ ಎಂಬ ತಾರೆ;
ಅದ ಮೈದುಂಬಿ ಕೊಳ್ಳಲು ಬಂದೆನು ನಾ ಮನಸಾರೆ,
ಜಲಧಾರೆಯ ಸೊಬಗಿಗೆ ಮನದ ನೋವುಗಳು ಕಣ್ಮರೆ.
                               

ಅಲೆಮಾರಿ

ಬದುಕಿನ ಬವಣೆಯು ತೊಲಗಬೇಕೆಂದು,
ಹಗಲಿರುಳು ನಡೆದೆ ದಾರಿ ಸಿಗುವುದೆಂದು;
ಅನ್ನವನು ಹುಡುಕಿದೆ ಹಸಿವನು ನೀಗಿಸಲೆಂದು,
ಮುಂದುವರಿಸುತ ಸಾಗಿದೆ ನಾನು ಅಲೆಮಾರಿ ಎಂದು.

ದೇವದೂತನಿಗೆ ನಮನ

*ದೇವದೂತನಿಗೆ ನಮನ*
ಶಿವನ ವಿಭೂತಿಯನು ದೇಹಕ್ಕೆ ಧರಿಸಿ,
ಇಷ್ಟಲಿಂಗವನು ಭಕ್ತಯಿಂದ ಪೂಜಿಸಿ;
ಆನಂದ,ಆಸೆ,ಆಕಾಂಕ್ಷೆಗಳನ್ನು ತ್ಯಜಿಸಿ,
ಗುರು,ಲಿಂಗ,ಜಂಗಮವನ್ನು ಸದಾ ಸ್ಮರಿಸಿ;
ಕಾಯಕವೇ ಕೈಲಾಸ ಎಂಬ ತತ್ವವನನುಸರಿಸಿ,
ತ್ರಿವಿಧ ದಾಸೋಹವನ್ನು ದಿನಂಪ್ರತಿ ಪಸರಿಸಿ;
ಸಂಸ್ಕಾರ,ಸಂಸ್ಕೃತಿ ಎಂಬ ಜ್ಞಾನದ ಬೆಳಕನ್ನು ಬೆಳಗಿಸಿ;
ಮೇಲುಕೀಳು,ಮಡಿ‌-ಮೈಲಿಗೆ ಎಂಬುದನು ಮರೆಸಿ,
ಎಲ್ಲಾ ನನ್ನವರೇ ಎಂಬ ಕರುಣೆಯನು ತೋರಿಸಿ;
ತನ್ನೆಲ್ಲಾ ಲೋಕಕಲ್ಯಾಣದ ಕೆಲಸವನ್ನು ಮುಗಿಸಿ,
ಆ ದೇವನು ಈ ದೇವರ ಭೇಟಿಗೆನೋ ಕರೆಸಿ;
ಭಕ್ತಶರಣರಲ್ಲಿ ಅನಾಥ ಭಾವವ ಮೂಡಿಸಿ,
ಭರಿಸಿಲಾಗದ ದುಃಖದಲ್ಲಿ ದೇವರನ್ನು ಬೀಳ್ಕೊಡುಗಿಸಿ;
ಇಂಥಹ ಸಿದ್ದಿಶ್ರೇಷ್ಠರ ಚರಣಾರವಿಂದಕ್ಕೆ ವಂದಿಸಿ,
ಮತ್ತೆ ನಿಮ್ಮ ಹಾದಿಯನು ಕಾಯುವೆವು ಎಂದು ಪ್ರಾರ್ಥಿಸಿ;
ಶಿವಯೋಗಿಯ ಹಿತನುಡಿಗಳನ್ನು ನಾವೆಲ್ಲರೂ ಪಾಲಿಸಿಸೋಣ.






Sunday, January 20, 2019

ಹಂಪಿಯ ಗತ ವೈಭವ

ಕಲ್ಲು ಬಂಡೆಗಳ ಭಗ್ನವಾದ ಸಂಪು,
ಆಲಿಸುತ್ತಿದೆ ವಿಜಯನಗರ ಸಾಮ್ರಾಜ್ಯದ ಇಂಪು;
ಕೈ ಬೀಸಿ ಕರೆಯುತ್ತಿದೆ ಗತ ವೈಭವ ತಂಪು,
ಮನ ಸೆಳೆಯುತ್ತಿದೆ ಹಂಪಿಯ ಐತಿಹಾಸಿಕದ ಕಂಪು.
                          - ಸ್ಫೂರ್ತಿ

ನೀರೀಕ್ಷಣೆ

ಕೀಚಕರ ಜಗತ್ತಿನಲ್ಲಿ ಮುಗ್ಧತೆಯ ಜೀವಿಯಾದೆ,
ಹಂತಕರೆಂಬ ರಕ್ಕಸರ ಬಲೆಯಲ್ಲಿ ಸಿಲುಕಿದೆ;
ಅಹಾರವೆಂಬ ಬಯಕೆಗೆ ನೀ ನೀರೀಕ್ಷಿಸಿದೆ,
ಸಿಕ್ಕರು ಸಿಗದಿದ್ದರೂ ನೀ ಮೌನಿಯಾದೆ. 
                            - ಸ್ಫೂರ್ತಿ

ಮಾಗಿಯ ಚಳಿ

ಮುಗಿಲ ತುಂಬೆಲ್ಲಾ ಇಬ್ಬನಿಯ ಕಡು ನರ್ತನ,
ಮರದ ರೆಂಬೆ ಕೊಂಬೆಯಲ್ಲಾ ಪಕ್ಷಿಗಳ ಗಾಯನ;
ಭೂವಿಯ ತುಂಬಾ ವಿಧ ವಿಧ ಪುಷ್ಪದ ಸಂಮೋಹನ,
ಮಾಗಿಯ ಚಳಿಯಲ್ಲಿ ಬಿಸಿ ಬಿಸಿ ಕಾಫಿಯ ಪರಿಮಳ,
ಸಿಗುವುದು ನಮಗೆ ಇಂತಹ ಅವಕಾಶ ಬಲು ವಿರಳ.
                                  - ಸ್ಫೂರ್ತಿ

ಆಗಬೇಕು ನಡತೆಯಲ್ಲಿ ಶ್ರೀಮಂತ

ನೀನು ಮಾಡುವ ತಪ್ಪಿಗೆ ನೀನೇ ಸಿರಿವಂತ,
ಅದೆಲ್ಲವನ್ನೂ ಸಮ್ಮತಿಸುವನು ಆ ಭಗವಂತ;
ಅರಿಷಡ್ವರ್ಗಗಳನ್ನು ಬಿಟ್ಟರೆ ನೀ,
ಆಗುವೆ ಈ ಜಗದೊಳಗೆ ಶ್ರೀಮಂತ.
                        - ಸ್ಫೂರ್ತಿ

ಸಂಕ್ರಾಂತಿ

ಸವಿಯಬೇಕು ಎಳ್ಳು ಬೆಲ್ಲವ,
ಹೀಗಿರಬೇಕು ಕಬ್ಬಿನ ಸ್ವಾದವ;
ಮರೆಯಬೇಕು ದ್ವೇಷ,ವೈಮನಸ್ಯವ,
ಹರಡಬೇಕು ಪ್ರೀತಿ,ಮಮಕಾರವ;
ಸಂತೋಷದಿಂದ ಆಚರಿಸಬೇಕು ಸಂಕ್ರಾಂತಿ ಹಬ್ಬವ.
                              - ಸ್ಫೂರ್ತಿ

ಹೆತ್ತವರ ಪ್ರೀತಿಯೇ ಶಾಶ್ವತ

ಕಾಣದ ಪ್ರೀತಿಗೆ ಕೈವೊಡ್ಡುವರು ಎಲ್ಲಾ,
ಕಾಣವ ಪ್ರೀತಿಯನು ಹಂಬಲಿಸುವವರಿಲ್ಲ;
ತೊರೆಯುವ ಪ್ರೀತಿಯನು ಹಿಂಬಾಲಿಸುವರು ಎಲ್ಲಾ,
ಹೆತ್ತವರ ಪ್ರೀತಿಯೇ ಶಾಶ್ವತ ಎಂದೂ ಯಾರಿಗೂ ಗೊತ್ತಿಲ್ಲ.
                        - ಸ್ಫೂರ್ತಿ

ಪಯಣ ಸಂಗಾತಿ

ಮಾಸದ ಮುಗ್ಧತೆಯ ನೋಟವೂ ನೀ,
ಹುಣ್ಣಿಮೆಯ ಶಶಿಯ ಬಿಂಬವೂ ನೀ;
ಪ್ರೀತಿಯ ಹೊತ್ತು ತಂದ ದೇವನು ನೀ,
ಸದಾ ನನ್ನ ಪಯಣ ಸಂಗಾತಿ ಆಗು ನೀ.
                             - ಸ್ಫೂರ್ತಿ

ರಾಷ್ಟ್ರೀಯ ಯುವ ದಿನ

ಜ್ಞಾನ ಭಂಡಾರದ ಯಾಂತ್ರಿಕ,
ಆಧ್ಯಾತ್ಮ,ತತ್ವಶಾಸ್ತ್ರದ ಸಾತ್ವಿಕ;
ಯುವಪೀಳಿಗೆಗೆ ಸಾಧನೆ ಮಂತ್ರದ ಮಾಂತ್ರಿಕ,
ದೇಶ ಪ್ರೇಮದ ಧೀಮಂತ ನಾಯಕ.
                              - ಸ್ಫೂರ್ತಿ

ಪ್ರೀತಿಯ ವೇದಿಕೆ

ಹೃದಯವು ಮರೆತಿಲ್ಲಾ ನಮ್ಮ ಪ್ರೀತಿಯನು,
ಮನಸ್ಸು ತಿರುವಿ ಹಾಕುತ್ತಿದ್ದೆ ನೆನಪಿನ ಛಾಯೆಯನು;
ಪದೇ ಪದೇ ಒಂದಾಗುವಾಸೆ ಈ ಜೀವಕೆ,
ಕೂಡಿ ಬಂದರೆ ಆ ಕ್ಷಣ ನಾ ತಯಾರಿಸುವೆ ವೇದಿಕೆ.
                         - ಸ್ಫೂರ್ತಿ

ಒಂಟಿ ಜೀವನದ ಯಾತ್ರೆ

ಉರುಳುತ್ತಿದೆ ಸಮಯದ ಚಕ್ರವೂ,
ಮರೆಯಾಗುತ್ತಿದೆ ಕಳೆದ ದಿನಗಳು;
ನೆನಪಿಸುತ್ತಿದೆ ನೋವಿನ ತಿಮಿರುಗಳು,
ಪಯಣಿಸುತ್ತಿದೆ ಒಂಟಿ ಜೀವನದ ಯಾತ್ರೆಯೂ.
                      - ಸ್ಫೂರ್ತಿ

ಮೌನ

ಮೌನ ತಾಳಿತು ಮನಸು,
ಕರಗಿ ಹೋಯಿತು ಕನಸು;
ನಿನ್ನ ಪ್ರೀತಿಯ ನೆನಪಿನಲಿ,
ನಿನ್ನ ಸ್ನೇಹದ ಹುಡುಕಾಟದಲಿ.
                              - ಸ್ಫೂರ್ತಿ

ತುಕ್ಕು ಹಿಡಿದ ಕಬ್ಬಣ

ಹಿಡಿದಿರಲು ತುಕ್ಕು ಕಬ್ಬಿಣದ ವಸ್ತುಗಳಿಗೆ,
ಎಷ್ಟೇ ಪ್ರಯತ್ನಿಸಿದರೂ ಸರಿಯಾಗದು ಕೊನೆಗೆ;
ಹಿಡಿಯಬಾರದು ತುಕ್ಕು ನಮ್ಮ ಜೀವನದ ಗುರಿಗಳಿಗೆ,
ಹಿಡಿದರೆ ನಮ್ಮ ದಾರಿ ಪಲಾಯನದ ಕಡೆಗೆ.
                         - ಸ್ಫೂರ್ತಿ

ಅಮರವಾದ ಸ್ನೇಹ

ನಮ್ಮಿಬ್ಬರ ಸ್ನೇಹದ ತುಂಬಾ ತಮವಿದೆ,
ಹಿಮ ಕರಗಿ ನೀರಾಗಿ ನಿನ್ನ ಸ್ನೇಹ ಆವರಿಸಿದೆ;
ಆ ಸ್ನೇಹವ ಕೈ ಹಿಡಿದು ಬೆಳೆಸಿದೆ,
ಬೆಳೆದ ಸ್ನೇಹ ಇಂದು ಆಲದ ಮರವಾಗಿದೆ.
                       - ಸ್ಫೂರ್ತಿ

ಕಟ್ಟಬೇಕಿದೆ ನೆನಪಿಗೊಂದು ಗೋರಿ

ಬಳಿ ಬಂದೆನು ನಿನ್ನ ಪ್ರೀತಿಯ ಕೋರಿ,
ಅಕ್ಕರೆ ವಿಶ್ವಾಸದ ಕರುಣೆಯನ್ನು ತೋರಿ;
ಸಹಿಸಿದೆ ನಿನ್ನ ಬೂಟಾಟಿಕೆ ಮಾತನು ಮೀರಿ,
ಸತ್ತ ಪ್ರೀತಿಯ ನೆನಪಿಗೆ ಕಟ್ಟುವೆನು ಗೋರಿ.
                        - ಸ್ಫೂರ್ತಿ

ಸೌಂದರ್ಯ


ಕಣ್ ಕುಕ್ಕುವುದು ಆ ದಿವ್ಯವಾದ ನೋಟ,
ನೋಡುಗರಿಗೆ ಮಾಡುವುದು ಕನಸಿನ ಮಾಟ;
ಮನದ ತುಂಬೆಲ್ಲಾ ನಿನ್ನ ಪ್ರೀತಿಯ ಗುಂಗು,
ನನ್ನ ಬಾಳ ತುಂಬೆಲ್ಲಾ ನಿನ್ನ ನಗುವ ರಂಗು.
                              - ಸ್ಫೂರ್ತಿ

Monday, January 7, 2019

ಮಂದಹಾಸದ ಪ್ರವಾಹ

ಮಂದಹಾಸದ ಕಡಲಿನಲ್ಲಿ ಮುಳುಗುತ್ತಾ,
ಮುಗುಳು ನಗೆಯ ಅಲೆಗಳಲ್ಲಿ ತೇಲುತ್ತಾ;
ಬೆಳದಿಂಗಳ ಚಂದ್ರಮಕೆ ಸೋಲುತ್ತಾ,
ಸಂತೋಷದ ಪ್ರವಾಹವನ್ನು ನಾ ತಂದೆ.
                                                  - ಸ್ಫೂರ್ತಿ

ಬೇಲೂರ ವೈಭವ

ಶಿಲ್ಪಕಲೆಗಳ ಹೆಮ್ಮೆಯ ಊರು,
ಇಲ್ಲಿದೆ ನರ್ತಕಿಯರ ಶಿಲ್ಪಗಳು ಸಾವಿರಾರು;
ಇಲ್ಲಿ ವಾಸಿಸುತ್ತಿರುವುದು ಚೆನ್ನಕೇಶವ ದೇವರು,
ಅದುವೇ ಶಿಲ್ಪಸ್ಥಾವರದ ಬೀಡು ಬೇಲೂರು.
                                              - ಸ್ಫೂರ್ತಿ

ಹಳಿಯ ಮೇಲೆ ಜೀವನ

ಜೀವನ ಸಾಗುತ್ತಿದೆ ಹಳಿಗಳ ಕಡೆಗೆ,
ಕಷ್ಟ-ಸುಖಗಳು ಬಂಡಿಯ ಒಳಗೆ;
ನಂಬಿಕೆಯ ಕೊಂಡಿ ಕಳಚಿದರೆ ಕೆಳಗೆ,
ಭರವಸೆಯ ಹಾದಿ ಅರ್ನತವಾಗುವುದು ಕೊನೆಗೆ.
                                    - ಸ್ಫೂರ್ತಿ


ಎಲೆ

ಬಿಸಿಲಿನ ಬೇಗೆಗೆ ಬಸವಳಿದ ಎಲೆ ಬಿತ್ತು,
ತನ್ನ ಆಸೆ ಆಕಾಂಕ್ಷೆಗಳು ಕರಟು ಹೋಗಿತ್ತು;
ಮರೆಯಾಯಿತು ಎಲ್ಲರಿಗೂ ಹೇಳುತ್ತಾ,
ಎಲ್ಲರ ಬದುಕು ಕೊನೆಗೆ ಪತನದತ್ತಾ.
                                         - ಸ್ಫೂರ್ತಿ